ಚಿತ್ರ:ಮಿಲನ
ನಿರ್ದೇಶನ : ಪ್ರಕಾಶ್
ಸಂಗೀತ : ಮನೋ ಮೂರ್ತಿ
ಸಾಹಿತ್ಯ : ಜಯಂತ್ ಕಾಯ್ಕಿಣಿ
ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲಿ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲಾ
ನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇ ||ನಿನ್ನಿಂದಲೇ ||
ಇರುಳೆಲ್ಲಾ ಜ್ವರದಂತೆ ಕಾಡಿ
ಈಗ ಹಾಯಾಗಿ ನಿಂತಿರುವೆ ಸರಿಯೇನು?
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ತಡೆಬಂದಿದೇ ||ನಿನ್ನಿಂದಲೇ ||
ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನಾ
ಸೊಂಪಾದ ನಗುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನಾ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೇ ಮುದ್ದಾದ ಕರೆ ಬಂದಿದೇ ||ನಿನ್ನಿಂದಲೇ ||
1 comment:
ನಿಂತಲ್ಲೇ ಹಾಡಾದೆ ಅಲ್ಲ. ನಿಂತಲ್ಲೇ ಹಾಳಾದೆ ಎಂದು. ಜಯಂತ್ ಕಾಯ್ಕಿಣಿಯವರು ಇದನ್ನೇ ಟಿವಿಯಲ್ಲಿ ಹೇಳುತ್ತಿದ್ದಾರೆ
Post a Comment