ಚಿತ್ರ: ನೆನಪಿರಲಿ
ನಿರ್ದೇಶನ: ರತ್ನಜ
ಸಂಗೀತ, ಸಾಹಿತ್ಯ: ಹಂಸಲೇಖ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಅರೆ ಯಾರ್ರೀ ಹೆದರ್ ಕೊಳ್ಳೋರು...ಬೆದರ್ ಕೊಳ್ಳೋರು
ಪೇಚಾಡೋರು, ಪರದಾಡವ್ರು,
ಮರಗಳ್ ಮರೆನಲ್ಲಿ ಮಾತಾಡವ್ರು,
ಮಾರ್ನಿಂಗ್ ಶೋನಲ್ಲಿ ಪಿಸ್ಗುಟ್ಟವ್ರು
ಮೈಸೂರ್ ಅಂತಾ ಜಿಲ್ಲೇಲಿದ್ದೂ
ಕಣ್ಣಿಗ್ ಬೇಕಾದ್ ನೋಟ ಇದ್ದೂ
ಹಳೆ ರಾಜ್ರ್ರು ಅಪ್ಣೆ ಇದ್ದೂ
ಪ್ರೀತಿ ಮಾಡೋಕ್ ಜಾಗ್ಗುಳ್ ಇದ್ದೂ
ಕದ್ದು ಮುಚ್ಚಿ ಓಡಾಡ್ತೀರಲ್ರೀ
ಬನ್ರೀ.. ನೋಡ್ರೀ... ನಾನ್ ಲವ್ ಮಾಡೊ ಸ್ಟೈಲ್ ಸ್ವಲ್ಪ ಕಲೀರೀ.....!
ಕೂರಕ್ ಕುಕ್ಕ್ರಳ್ಳಿ ಕೆರೆ...ವಾ ವಾ
ತೇಲಕ್ ಕಾರಂಜಿ ಕೆರೆ...ವಾ ವಾ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಬಲ್ ಮುರೀಲಿ ಪೂಜೆ ನೆಪ
ಎಡ್ ಮುರೀಲಿ ಜಪ ತಪ ||೨||
ಲವ್ವಿಗೆ ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್‍ಪಟ್ಣ
ಸೌತಿನಲ್ಲಿ ನಂಜನ್‍ಗೂಡು ..ಪೂಜೆಗೇ....ಲವ್ ಪೂಜೆಗೇ
ಈ ಭಯ ಬಿಸಾಕೀ...ಲವ್ ಮಾಡಿ..ಲವ್ ಮಾಡಿ..ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಗಲಾಟೆನೇ ಇಲ್ಲ ಬನ್ರೀ ||೨|| ಗಂಗೊತ್ರಿಯಲ್ಲಿ
ಮನಸ್ಸು ಬಿಚ್ಕೊಳ್ರೀ , ಮರಮರ ಮರದ ಮರೇಲೀ
ಅರ್‍ಮನೆಲಿ ಅಡ್ಡಾಡುತ ||೨|| ಮೂಡು ತಗೊಳ್ರೀ
ರಾಜ್ರ ತರಾನೇ ಲವ್ವಲ್ ದರ್ಬಾರ್ ಮಾಡ್ಬಿಡ್ರೀ
ಹೇ ರಂಗಂತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕತೋರೆಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ ಇಲ್ ರಸ್ತೆ ಆಗವ್ನೆ
ಪ್ರೀತಿ ಮಾಡೋವ್ರ್ ಗೆ ಸರಿ ದಾರಿ ತೋರ್‍ತಾನೆ
ಕೆ.ಆರ್.ಎಸ್ ಅಲ್ಲಿ ಕೆಫೆ ಮಾಡಿ, ಬ್ಲಫ್ಫಿನಲ್ಲಿ ಬಫೆ ಮಾಡಿ
ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿ ಕೊಪ್ಪಲ್
ಲವ್ವಿಗೆ ಈ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಜಾತಿ ಬಿಟ್ರು ಸುಖ ಪಡ್ಬೇಕ್, ||೨|| ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗಿ ಹೋಗ್ಲಮ್ಮಾ
ಕದ್ದು ಮುಚ್ಚಿ ಪ್ರೀತಿ ಮಾಡೋದ್ ||೨|| ಕಳ್ಳ ಲವಮ್ಮ
ಸತ್ಯ ಹೇಳಮ್ಮ, ನಿಜವಾದ್ ಪ್ರೀತಿ ಮಾಡಮ್ಮಾ
ಜಾತಿ ಸುಡೋ ಮಂತ್ರ ಕಿಡಿ, ಪ್ರೀತಿ ಕಣಮ್ಮಾ
ಮನುಜ ಮತ ವಿಶ್ವಪಥ ಅಂಥ ಹೇಳಮ್ಮಾ
ತೀರ್ಥಹಳ್ಳೀಲಿ ಕುವೆಂಪು ಹುಟ್ಟಿದ್ರು
ವಿಶ್ವಪ್ರೇಮನಾ ಮೈಸೂರ್‍ಗೆ ತಂದ್ ಕೊಟ್ರು
ಮೈಸೂರೂ ಕೂಲಾಗಿದೆ, ಬೃಂದಾವನ ಗ್ರೀನಾಗಿದೆ ಲವ್ವಿಗೇ...ಸ್ವೀಟ್ ಲವ್ವಿಗೇ
ನರಸಿಂಸ್ವಾಮಿ ಪದ್ಯ ಇದೆ
ಅನಂತ್‍ಸ್ವಾಮಿ ವಾದ್ಯ ಇದೆ
ಸಾಂಗಿಗೆ ಲವ್ ಸಾಂಗಿಗೆ
ಈ ಭಯ ಬಿಸಾಕೀ ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಕೂರಕ್ ಕುಕ್ಕ್ರಳ್ಳಿ ಕೆರೆ
ತೇಲಕ್ ಕಾರಂಜಿ ಕೆರೆ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಂ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ!!!!
No comments:
Post a Comment