Friday, November 16, 2007

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ರಚನೆ: ಹುಯಿಲಗೋಳ ನಾರಾಯಣರಾವ್
ಸಂಗೀತ: ಪಿ. ಕಾಳಿಂಗರಾವ್

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು.

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.

ಜಯ ಭಾರತ ಜನನಿಯ ತನುಜಾತೆ

ರಚನೆ: ಕುವೆಂಪು
ಸಂಗೀತ: ಸಿ.ಅಶ್ವತ್ಥ್

ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೇ
ಜಯ ಹೇ ರಸ ಋಷಿಗಳ ಬೀಡೆ.
ಭೂದೇವಿಯ ಮಕುಟದ ನವಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ


ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ !!


ಜನನಿಯ ಜೋಗುಳ ವೇದದ ಘೋಶ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,


ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ !!


ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶರರಿಹ ದಿವ್ಯಾರಣ್ಯ,
ರನ್ನ ಶಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ,
ಕಬ್ಬಿಗರುದಿಸಿದ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ,
ನಾನಕ ರಾಮಾನಂದ ಕಬೀರರ


ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ !!



ತೈಲಪ ಹೊಯ್ಸಳರಾಳಿದ ನಾಡೇ
ಕಂಕಣ ಜಕಣರ ನಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ
ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ


ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ !!

ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿನ್ದು ಕ್ರೈಸ್ತ ಮುಸಲ್ಮಾನ
ಪರತಿಕ ಜೈನರುಗ್ಯಾನ

ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈನಿಕರಾರಾಮ
ಕನ್ನದ ನುಡಿ ಕುಣಿದಾಡುವ ಗೇಹ
ಕನ್ನದ ತಾಯಿಯ ಮಕ್ಕಳ ದೇಹ


ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ !!

ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ರಚನೆ: ಡಿ.ಎಸ್. ಕರ್ಕಿ
ಸಂಗೀತ: ಸಿ. ಅಶ್ವತ್ಠ್

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು |
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕಚ್ಚೇವು
ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡೆಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ? -ನಾಡೊಲವೆ ನೀತಿ ಹಿಡಿ ನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ಕರುನಾಡಿನವರಿವ ನೆರೆತೀವಿ ಭಾವ-
ದಲಿ ಜೀವನಾಡಿ ನುಡಿಸೇವು
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು
ನಮ್ಮನ್ನವುಂಡು ಅನ್ಯಾಯಗೈಯು
ವಂಥವರ ಹುಚ್ಚ ಬಿಡಿಸೇವು
ಇಹುದೆಮಗೆ ಛಲವು, ಕನ್ನಡರ ಬಲವು ಕನ್ನಡದ ಒಲವು -ಹಿಡಿನೆನವು
ನಮ್ಮದೆಯ ಕೆಚ್ಚುನೆಚ್ಚುಗಳನೂಡಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದಾ ಹೆಸರ ಉಳಿಸ-
ಲೆಲ್ಲಾರು ಒಂದುಗೂಡೇವು
ನಮ್ಮದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ, ಕಡೆದೇವು ಇರುಳ ಪಡೆದೇವು ತಿರುಳ -ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ.

Friday, September 7, 2007

ಆನಂದಮಯ ಈ ಜಗಹೃದಯ (ಭಾವಗೀತೆ)

ಕವಿ : ಕುವೆಂಪು
ಸುರುಳಿ: ಭಾವಬಿಂದು
ಸಂಗೀತ : ಸಿ.ಅಶ್ವಥ್
ಗಾಯನ : ಶಿವಮೊಗ್ಗ ಸುಬ್ಬಣ್ಣ

ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ

ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ

ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನು ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ

ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ

ಉದಯದೊಳೇನ್ ಉದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ

ನಿನ್ನ ಕ೦ಗಳ ಕೊಳದಿ (ಭಾವಗೀತೆ)

ಕವಿ : ಎಂ.ಎನ್. ವ್ಯಾಸರಾವ್
ಸಂಗೀತ: ಅಶ್ವತ್ಥ್
ಗಾಯನ: ರತ್ನಮಾಲಾ ಪ್ರಕಾಶ್

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು ||೨||
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು
ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆಯ ನಗೆಯು ಛೇಡಿಸಿಹುದು ||೨||
ಬಳಿಗೆ ಬಾರದೆ ನಿ೦ತೆ ಹೃದಯ ತು೦ಬಿದೆ ಚಿ೦ತೆ ||೨||
ಜೀವ ನಿನ್ನಾಸರೆಗೆ ಕಾಯುತಿಹುದು

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು

ನಾನೊ೦ದು ದಡದಲ್ಲಿ ನೀನೊ೦ದು ದಡದಲ್ಲಿ||೨||
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ಎ೦ದು ಬರುವುದೊ ಕಾಣೆ||೨||
ನೀನಿರುವ ಬಳಿಯಲ್ಲಿ ನನ್ನ ಬಿಡಲು

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು
ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ನನ್ನೆದೆಯ ಕಡಲೇಕೆ ಬೀಗುತಿಹುದು
ನನ್ನೆದೆಯ ಕಡಲೇಕೆ ಬೀಗುತಿಹುದು

ಕಲ್ಪನಾ ಛಾಯೆಯಲಿ (ಭಾವಗೀತೆ)

ಕವಿ : ರಾಜಶೇಖರ ಭೂಸ್ನೂರ್ಮಠ್
ಸುರುಳಿ: ದೀಪೋತ್ಸವ
ಸಂಗೀತ, ಗಾಯನ: ಮೈಸೂರು ಅನಂತಸ್ವಾಮಿ

ಕಲ್ಪನಾ ಛಾಯೆಯಲಿ ನಲ್ಮೆಯ ನೌಕೆಯಲಿ
ನೀಲ ಮಣಿ ಹೊಳೆದಂತೆ ಹೊಳೆ ಹೊಳೆದು
ಹೋದೆಯ ಶಕ್ತಿ ತನುಜಾತೆ

ಜಗವೆಲ್ಲ ಮಲಗಿಹುದು
ಚಂದಿರನು ನಗುತಿಹನು
ತಂಗಾಳಿ ಬೀಸುತಿದೆ
ನೀನೆಲ್ಲಿ ಮನದನ್ನೆ
ಕುಂತಳಾ ಶೋಭೆಯೇ

ಆ ಪ್ರಥಮ ದರುಶನದಿ ಮೊಗದ ಚೆಲುವ ತೋರಿ
ನೂಪುರದ ರವ ಬೀರಿ ಮಲ್ಲಿಗೆಯ ನಗೆ ನಕ್ಕೆ
ತನಿ ರಸದಾ ತವರೆ

ಆ ನೋಟ ನುಡಿಯಾಗಿ ಆ ನಗೆಯು ನಗೆಯಾಗಿ
ಆ ನೇಹ ಮಧುವಾಗಿ ಮನದಲ್ಲಿ ಸುಳಿಯುತಿವೆ
ಲಾಸ್ಯ ಪ್ರವೀಣೆ

Monday, September 3, 2007

ಈ ಸಂಜೆ ಯಾಕಾಗಿದೆ (ಗೆಳೆಯ)

ಚಿತ್ರ: ಗೆಳೆಯ
ನಿರ್ದೇಶನ: ಹರ್ಷ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ..//೧//
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ..
ಏಕಾಂತವೇ ಆಲಾಪವೂ ಏಕಾಂಗಿಯಾ ಸಲ್ಲಾಪವೂ
ಈ ಮೌನ ಬಿಸಿಯಾಗಿದೆ ಓ...ಈ ಮೌನ ಬಿಸಿಯಾಗಿದೆ // ಈ ಸಂಜೆ..//

ಲಾ ಲಾ ಲ ಲ ಲಾ ಲ ಲಾ ಲಾ....

ಈ ನೋವಿಗೆ ಕಿಡೀ ಸೋಕಿಸಿ ಮಜ ನೋಡಿವೇ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೇ ನನ್ನಾ ಕ್ಷಣಾ
ನೆನಪೆಲ್ಲವೂ ಹೂವಾಗಿದೆ ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೇ..ಈ ಜೀವ ಕಸಿಯಾಗಿದೇ ..// ಈ ಸಂಜೆ..//

ಆ ಆ ಆ...ಆ ಆ ಆ..

ನೀನಿಲ್ಲದೇ ಆ ಚಂದಿರಾ ಈ ಕಣ್ಣಲೀ ಕಸವಾಗಿದೇ
ಅದನೂದುವಾ ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೇ
ಆಕಾಶದೀ ಕಲೆಯಾಗಿದೇ ಈ ಸಂಜೆಯಾ ಕೊಲೆಯಾಗಿದೇ
ಈ ಗಾಯ ಹಸಿಯಾಗಿದೇ...ಈ ಗಾಯ ಹಸಿಯಾಗಿದೇ ..// ಈ ಸಂಜೆ.. //

Thursday, August 30, 2007

ಯಾರು ತಿಳಿಯರು (ಬಭ್ರುವಾಹನ)

ಚಿತ್ರ : ಬಭ್ರುವಾಹನ
ಸಂಗೀತ: ಟಿ.ಜಿ. ಲಿಂಗಪ್ಪ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಗಾಯನ: ರಾಜ್ ಕುಮಾರ್, ಪಿ.ಬಿ.ಶ್ರೀನಿವಾಸ್
ವರ್ಷ : ೧೯೭೭

ಬಭ್ರುವಾಹನ:
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ.. ಆ... ಆ .. ಆ..

ಅರ್ಜುನ:
ಅಸಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ.. ಈ...

ಬಭ್ರುವಾಹನ:
ಓ ಹೊ ಹೋ ಹೊ ಉಗ್ರಪ್ರತಾಪಿ ಆಂ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯೆಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡೀ ..ಈ ...

ಅರ್ಜುನ:
ಫಡ ಫಡ ಶಿಖಂಡಿಯೆಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ .. ಆ...

ಬಭ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ:
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬಭ್ರುವಾಹನ:
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ

ಬಭ್ರುವಾಹನ:
ಅಂತಕನಿಗೆ ಅಂತಕನು ಈ ಬಭ್ರುವಾಹನ

Wednesday, August 29, 2007

ನಿನ್ನಿಂದಲೇ ನಿನ್ನಿಂದಲೇ (ಮಿಲನ)

ಚಿತ್ರ:ಮಿಲನ
ನಿರ್ದೇಶನ : ಪ್ರಕಾಶ್
ಸಂಗೀತ : ಮನೋ ಮೂರ್ತಿ
ಸಾಹಿತ್ಯ : ಜಯಂತ್ ಕಾಯ್ಕಿಣಿ

ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲಿ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲಾ
ನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇ ||ನಿನ್ನಿಂದಲೇ ||

ಇರುಳೆಲ್ಲಾ ಜ್ವರದಂತೆ ಕಾಡಿ
ಈಗ ಹಾಯಾಗಿ ನಿಂತಿರುವೆ ಸರಿಯೇನು?
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ತಡೆಬಂದಿದೇ ||ನಿನ್ನಿಂದಲೇ ||


ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನಾ
ಸೊಂಪಾದ ನಗುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನಾ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೇ ಮುದ್ದಾದ ಕರೆ ಬಂದಿದೇ ||ನಿನ್ನಿಂದಲೇ ||

ನೂರೂ ಜನ್ಮಕೂ

ಚಿತ್ರ: ಅಮೇರಿಕಾ ಅಮೇರಿಕಾ
ನಿರ್ದೇಶನ, ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಮನೋ ಮೂರ್ತಿ

ನೂರೂ ಜನ್ಮಕೂ...
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ ಓಹೋಹೋ
ನನ್ನೆದೆಯ ಬಾಂದಳದೀ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ

ನೂರೂ ಜನ್ಮಕೂ...

ಬಾ ಸಂಪಿಗೆ ಸವಿಭಾವಲಹರೀ ಹರಿಯೇ
ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ ಓಹೋಹೊ
ಲೋಕದಾ ಸುಖವೆಲ್ಲಾ ನಿನಗಾಗಿ ಮುಡಿಪಿರಲೀ
ಇರುವಂಥ ನೂರು ಕಹೀ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ

ನೂರೂ ಜನ್ಮಕೂ...

ಕೂರಕ್ ಕುಕ್ಕ್ರಳ್ಳಿ ಕೆರೆ

ಚಿತ್ರ: ನೆನಪಿರಲಿ
ನಿರ್ದೇಶನ: ರತ್ನಜ
ಸಂಗೀತ, ಸಾಹಿತ್ಯ: ಹಂಸಲೇಖ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ

ಅರೆ ಯಾರ್ರೀ ಹೆದರ್ ‍ಕೊಳ್ಳೋರು...ಬೆದರ್ ‍ಕೊಳ್ಳೋರು
ಪೇಚಾಡೋರು, ಪರ‍ದಾಡವ್ರು,
ಮರಗಳ್ ಮರೆನಲ್ಲಿ ಮಾತಾಡವ್ರು,
ಮಾರ್ನಿಂಗ್ ಶೋನಲ್ಲಿ ಪಿಸ್ಗುಟ್ಟವ್ರು
ಮೈಸೂರ್ ಅಂತಾ ಜಿಲ್ಲೇಲಿದ್ದೂ
ಕಣ್ಣಿಗ್ ಬೇಕಾದ್ ನೋಟ ಇದ್ದೂ
ಹಳೆ ರಾಜ್ರ್ರು ಅಪ್ಣೆ ಇದ್ದೂ
ಪ್ರೀತಿ ಮಾಡೋಕ್ ಜಾಗ್ಗುಳ್ ಇದ್ದೂ
ಕದ್ದು ಮುಚ್ಚಿ ಓಡಾಡ್ತೀರಲ್ರೀ
ಬನ್ರೀ.. ನೋಡ್ರೀ... ನಾನ್ ಲವ್ ಮಾಡೊ ಸ್ಟೈಲ್ ಸ್ವಲ್ಪ ಕಲೀರೀ.....!

ಕೂರಕ್ ಕುಕ್ಕ್ರಳ್ಳಿ ಕೆರೆ...ವಾ ವಾ
ತೇಲಕ್ ಕಾರಂಜಿ ಕೆರೆ...ವಾ ವಾ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.

ಬಲ್ ಮುರೀಲಿ ಪೂಜೆ ನೆಪ
ಎಡ್ ಮುರೀಲಿ ಜಪ ತಪ ||೨||
ಲವ್ವಿಗೆ ನಿರ್ವಿಘ್ನ ಲವ್ವಿಗೆ

ನಾರ್ತಿನಲ್ಲಿ ಶ್ರೀರಂಗ್‍ಪಟ್ಣ
ಸೌತಿನಲ್ಲಿ ನಂಜನ್‍ಗೂಡು ..ಪೂಜೆಗೇ....ಲವ್ ಪೂಜೆಗೇ
ಈ ಭಯ ಬಿಸಾಕೀ...ಲವ್ ಮಾಡಿ..ಲವ್ ಮಾಡಿ..ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರೀ ||೨|| ಗಂಗೊತ್ರಿಯಲ್ಲಿ
ಮನಸ್ಸು ಬಿಚ್ಕೊಳ್ರೀ , ಮರಮರ ಮರದ ಮರೇಲೀ
ಅರ್‍ಮನೆಲಿ ಅಡ್ಡಾಡುತ ||೨|| ಮೂಡು ತಗೊಳ್ರೀ
ರಾಜ್ರ ತರಾನೇ ಲವ್ವಲ್ ದರ್ಬಾರ್ ಮಾಡ್ಬಿಡ್ರೀ

ಹೇ ರಂಗಂತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕತೋರೆಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು

ಕಾಳಿದಾಸನೆ ಇಲ್ ರಸ್ತೆ ಆಗವ್ನೆ
ಪ್ರೀತಿ ಮಾಡೋವ್ರ್ ಗೆ ಸರಿ ದಾರಿ ತೋರ್‍ತಾನೆ

ಕೆ.ಆರ್.ಎಸ್ ಅಲ್ಲಿ ಕೆಫೆ ಮಾಡಿ, ಬ್ಲಫ್ಫಿನಲ್ಲಿ ಬಫೆ ಮಾಡಿ
ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿ ಕೊಪ್ಪಲ್
ಲವ್ವಿಗೆ ಈ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಜಾತಿ ಬಿಟ್ರು ಸುಖ ಪಡ್ಬೇಕ್, ||೨|| ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗಿ ಹೋಗ್ಲಮ್ಮಾ
ಕದ್ದು ಮುಚ್ಚಿ ಪ್ರೀತಿ ಮಾಡೋದ್ ||೨|| ಕಳ್ಳ ಲವಮ್ಮ
ಸತ್ಯ ಹೇಳಮ್ಮ, ನಿಜವಾದ್ ಪ್ರೀತಿ ಮಾಡಮ್ಮಾ
ಜಾತಿ ಸುಡೋ ಮಂತ್ರ ಕಿಡಿ, ಪ್ರೀತಿ ಕಣಮ್ಮಾ
ಮನುಜ ಮತ ವಿಶ್ವಪಥ ಅಂಥ ಹೇಳಮ್ಮಾ
ತೀರ್ಥಹಳ್ಳೀಲಿ ಕುವೆಂಪು ಹುಟ್ಟಿದ್ರು
ವಿಶ್ವಪ್ರೇಮನಾ ಮೈಸೂರ್‍ಗೆ ತಂದ್ ಕೊಟ್ರು

ಮೈಸೂರೂ ಕೂಲಾಗಿದೆ, ಬೃಂದಾವನ ಗ್ರೀನಾಗಿದೆ ಲವ್ವಿಗೇ...ಸ್ವೀಟ್ ಲವ್ವಿಗೇ
ನರಸಿಂ‍ಸ್ವಾಮಿ ಪದ್ಯ ಇದೆ
ಅನಂತ್‍ಸ್ವಾಮಿ ವಾದ್ಯ ಇದೆ
ಸಾಂಗಿಗೆ ಲವ್ ಸಾಂಗಿಗೆ

ಈ ಭಯ ಬಿಸಾಕೀ ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಕೂರಕ್ ಕುಕ್ಕ್ರಳ್ಳಿ ಕೆರೆ
ತೇಲಕ್ ಕಾರಂಜಿ ಕೆರೆ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಂ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ!!!!

ನೀನೆ ನೀನೆ ನನಗೆಲ್ಲಾ ನೀನೆ

ಚಿತ್ರ: ಆಕಾಶ್
ನಿರ್ದೇಶನ: ಮಹೇಶ್ ಬಾಬು
ಸಂಗೀತ : ಆರ್. ಪಿ. ಪಟ್ನಾಯಕ್
ಸಾಹಿತ್ಯ: ಕಲ್ಯಾಣ್
ಗಾಯನ: ಕುನಾಲ್ ಗಾಂಜಾವಾಲ

ನೀನೆ ನೀನೆ ನನಗೆಲ್ಲಾ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬ ನಿನ್ನ ಪ್ರೀತಿ ತಾನೆ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ಮಳೆಯಲ್ಲು ನಾ ಬಿಸಿಲಲ್ಲೂ ನಾ ಚಳಿಯಲ್ಲೂ ನಾ ಜೊತೆ ನಡೆಯುವೆ
ಹಸಿವಲ್ಲೂ ನಾ ನೋವಲ್ಲು ನಾ ಸಾವಲ್ಲು ನಾ ಜೊತೆ ನಿಲ್ಲುವೆ
ನಾನಾ ದೇಶ ನಾನಾ ವೇಷ ಯಾವುದಾದರೇನು
ಒಪ್ಪಿಕೊಂಡ ಈ ಮನಸುಗಳೆರಡು ಎಂದು ಹಾಲು ಜೇನು

ನೀನೆ ನೀನೆ ನೀನೆ ನೀನೆ ||ನೀನೆ ನೀನೆ ನನಗೆಲ್ಲಾ ನೀನೆ||

ಕ್ಷಣವಾಗಲಿ ದಿನವಾಗಲಿ ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ ನಿನ್ನ ಬದುಕಲಿ ಬೆಳಕಾಗುವೆ
ಏನೇ ಆಗಲಿ ಪ್ರಾಣಾ ಹೋಗಲಿ ನನಗೆ ನೀನೇ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು

ನೀನೆ ನೀನೆ ನೀನೆ ನೀನೆ ||ನೀನೆ ನೀನೆ ನನಗೆಲ್ಲಾ ನೀನೆ ||

ಸವಿಯೊ ಸವಿಯೊ

ಚಿತ್ರ: ಸವಿ ಸವಿ ನೆನಪು
ನಿರ್ದೇಶನ: ಸಂತೋಷ್ ರೈ ಪಾತಾಜೆ
ಸಂಗೀತ: ಆರ್. ಪಿ. ಪಟ್ನಾಯಕ್
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಗಾಯನ: ಸೋನು ನಿಗಮ್, ಶ್ರೇಯಾ ಘೋಷಾಲ್

ನಾಯಕಿ: ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ
ನಾಯಕ: ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ..

ನಾಯಕ: ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ..
ನಾಯಕಿ: ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ..

ನಾಯಕ: ಸೂರ್ಯನಂತೆ ನಾ ಹೊಳೆವಾಗ
ಭೂಮಿಯಂತೆ ನೀ ಬಾ..
ನಾಯಕಿ: ಭೂಮಿಯಂತೆ ನಾ ಕರೆವಾಗ
ಮಳೆ ಬಿಲ್ಲಂತೆ ನೀ ಬಾ..

ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ

..


ನಾಯಕಿ: ನೀ ಬರುವ ದಾರಿಯಲ್ಲಿ
ಒಲವೆಂಬ ರಂಗವಲ್ಲಿ..
ನಿನಗಾಗಿ ಮೂಡಿದೆ ನೋಡು ಬಾ
ನಾಯಕ: ಹೆಯ್ ಹೆಯ್ ಹೇ. ಒಡಲಾಳ ತಂತು ಸ್ನೇಹ
ಒಡಮೂಡಿ ಬಂತು ಮೋಹ..
ಕತೆಯಾಗಿ ಕಾಡಿತು ಮೂಡಿತು..
ನಾಯಕಿ: ನೀ ಗದ್ಯಾದೋಳದ್ದೀದ ಪದ್ಯಾದ ಮಧ್ಯದ ಅದ್ಭುತ ಭಾವಾರ್ಥವೆ..
ನಾಯಕ: ನೀ ಗದ್ಯಾದೋಳದ್ದೀದ ಪದ್ಯಾದ ಮಧ್ಯದ ಅದ್ಭುತ ಭಾವಾರ್ಥವೆ..

ಸವಿಯೊ..

ನಾಯಕ: ಮರುಭೂಮಿಯಾನದಲ್ಲಿ
ಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೆ..
ನಾಯಕಿ: ಹಾ ಹಾ ಮುಂಜಾನೆ ಮಂಜಿನಲ್ಲು
ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮಯ್ಯಿಗು ಮನಸಿಗೂ..
ನಾಯಕ: ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಹೆಣ್ಣಲ್ಲವೇ..
ನಾಯಕಿ: ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಗಂಡಲ್ಲವೇ..


ನಾಯಕಿ: ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ
ನಾಯಕ: ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ..

ನಾಯಕ:ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ..
ನಾಯಕಿ: ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ..

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ

ಚಿತ್ರ : ಹುಡುಗಾಟ
ನಿರ್ದೇಶನ: ಸಂಜಯ್
ಸಾಹಿತ್ಯ : ಕವಿರಾಜ್
ಸಂಗೀತ : ಜೆಸ್ಸಿ ಗಿಫ್ಟ್
ಗಾಯಕರು : ಜಾರ್ಜ್ ಪೀಟರ್, ಜೆಸ್ಸಿ ಗಿಫ್ಟ್, ಪ್ರಸನ್ನ

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಗೆಲುವೆ ನನ್ನಯ ಲೈಫಿನ ಫ್ಯಾಶನ್
ನನಗೆ ಇಲ್ಲವೊ ಯಾವುದೆ ಟೆಂಶನ್
ನಗಿಸಿ ನಗುವುದೆ ನಮ್ಮಯ ಫ್ಯಾಶನ್
ಎಲ್ಲೆ ಹೋದರು ನಾವ್ ಸೆಂಸೇಶನ್

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಕೈತುಂಬಾ ಕಾಸಿದ್ರೆ ಮೈತುಂಬಾ ಜೋಶಿದ್ರೆ
ಜಗವೆಲ್ಲ ಜೇಬಲ್ಲಿ ಸ್ವರ್ಗಾನೆ ಅಂಗೈಲಿ
ಆ ಸೂರ್ಯ ಬಾನಲ್ಲಿ ಹುಟ್ತಾನೆ ನಮ್ ಕೇಳಿ

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಉಳಿಯೋಕೆ ೫ ಸ್ಟಾರು ಸುತ್ತೇಲ್ಲ ಹುಡುಗೀರು
ಲೈಫಲ್ಲಿ ಗ್ಲಾಮ್ಮರ್ರು ಇದ್ರ್‍ಏನೆ ಸೂಪರ್ರು
ನಾನೇನೆ ಮಾಡಿದ್ರು ನನ್ಯಾರು ಕೇಳೋರು

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ

ಚಿತ್ರ : ಚೆಲುವಿನ ಚಿತ್ತಾರ
ಸಂಗೀತ: ಮನೋ ಮೂರ್ತಿ
ಸಾಹಿತ್ಯ: ಎಸ್. ನಾರಾಯಣ್
ಗಾಯನ: ಚೇತನ್

ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ
ಜೀವದಾಣೆ ಜನ್ಮದಾಣೆ
ನನ್ನ ಪ್ರೀತಿ ನಿನಗೆ ತಾನೆ....

ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ
ಕುಣಿದಾಡುವಾಸೆ ನಿನ್ನಲಿ ನನ್ನನ್ನೆ ಚೆಲ್ಲಿ
ಜೀವದಾಣೆ ಜನ್ಮದಾಣೆ
ನನ್ನ ಪ್ರೀತಿ ನಿನಗೆ ತಾನೆ....

ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ

ನೀ ನನಗೊಲಿದ ಕ್ಷಣದಿಂದ ಈ ಭೂಮಿಗೆ ಹಸಿರು ವರವಾಯ್ತು
ನಿನ್ನೊಳಗಿರುವ ಸುಖಗಳಿಗೆ ಮುಗಿಲಿಗು ಬಣ್ಣ ಬಂದಾಯ್ತು
ನೀ ನನಗೊಲಿದ ಕ್ಷಣದಿಂದ ನನ್ನುಸಿರಿಗು ಜೀವ ಬಂದಾಯ್ತು
ನಿನ್ನೊಡಗಿರುವ ಪ್ರತಿ ಕ್ಷಣವು ಸ್ವರ್ಗವೆ ನನ್ನ ವಶವಾಯ್ತು

ಜೀವದಾಣೆ ಜನ್ಮದಾಣೆ
ನನ್ನ ಪ್ರೀತಿ ನಿನಗೆ ತಾನೆ....
ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ
ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ

ನಿನ್ನನು ಕಂಡ ದಿನದಿಂದ ಈ ರೂಪವೆ ನನಗೆ ಕಿರಿದಾಯ್ತು
ನಿನ್ನನು ಪಡೆದ ಕ್ಷಣದಿಂದ ನಿತ್ಯವು ಹುಣ್ಣಿಮೆ ನನಗಾಯ್ತು
ಇದ್ದರೆ ನಿನ್ನೊಡನಿರಬೇಕು ನಿರ್ಮಲ ಪ್ರೀತಿಯ ಸವಿಬೇಕು
ಇಬ್ಬರು ಹೀಗೆ ಬೆರಿಬೇಕು ಸುಂದರ ಕವಿತೆಯ ಬರಿಬೇಕು

ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ
ಜೀವದಾಣೆ ಜನ್ಮದಾಣೆ
ನನ್ನ ಪ್ರೀತಿ ನಿನಗೆ ತಾನೆ....

ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ
ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ...
ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎಂದು

ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ

ನೋವು ಇಲ್ಲದ ಜೀವನವೇ ಇಲ್ಲ ಗೆಳತಿ
ಕಂಬನಿ ಇಲ್ಲದ ಕಂಗಳಿಲ್ಲಾ
ದುಃಖ ಇಲ್ಲದ ಮನಸ್ಸು ಇಲ್ಲವೇ ಬರಿ
ಸುಖವ ಕಂಡ ಮನುಜನಿಲ್ಲ
ನಮ್ ಪ್ರೀತಿ ಸಾಯೊದಿಲ್ಲ
ಅದಕ್ಕೆಂದು ಸೋಲೆ ಇಲ್ಲ
ನನ್ನಾಣೆ ನಂಬು ನನ್ನ ಉಸಿರೆ
ನನಗಾಗಿ ಜನಿಸಿದೆ ನೀನು ನನ್ನೊಳಗೆ ನೆಲೆಸಿದೆ ನೀನು
ನಿನಗಾಗೆ ಬದುಕಿದೆ ನಾನು
ನೀನನ್ನ ಅಗಲಿದಾಕ್ಷಣೆವೆ ನಾ ನಿನಗಿಂತ ಮೊದಲೆ ಮಡಿವೆ

ತಂದೆಯ ತಾಯಿಯ ಬಿಟ್ಟು ಬಂದೆ ನೀ ಗೆಳತಿ
ಇಬ್ಬರ ಪ್ರೀತಿಯ ನಾ ಕೊಡುವೆ
ನನ್ನೆದೆ ಗೂಡಲಿ ಬಂದಿಸಿ ನಾ ನಿನ್ನ ಗೆಳತಿ
ಸಾವಿಗು ಅಂಜದೆ ಎದೆಕೊಡುವೆ
ಮಗುವಂತೆ ಲಾಲಿಸಲೇನು
ಮಡಿಲಲ್ಲಿ ತೂಗಿಸಲೇನು
ಬೆಳಂದಿಂಗಳ ಊಟ ಮಾಡಿಸಲೇನು
ಕಣ್ಮುಚ್ಚಿ ಕುಳಿತರೆ ನೀನು ಕಣ್ಣಾಗಿ ಇರುವೆ ನಾನು
ಕನಸಲ್ಲು ಕಾವಲಿರುವೆ
ಕಣ್ಣೀರು ಬಂದರಿಲ್ಲಿ ಕಣ್ಮರೆಯಾಗುವೆ ನಾ, ನನಗೆ ನೀನೆ ಉಸಿರು

ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ...
ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎಂದು

ಜನುಮದಾ ಗೆಳತಿ ಉಸಿರಿನಾ ಒಡತಿ

ಚಿತ್ರ: ಚೆಲುವಿನ ಚಿತ್ತಾರ
ಸಂಗೀತ: ಜೋಶ್ವಾ ಶ್ರೀಧರ್
ಸಾಹಿತ್ಯ: ಎಸ್. ನಾರಾಯಣ್
ಗಾಯನ: ಚೇತನ್

ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ...
ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎಂದು

ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ

ನೋವು ಇಲ್ಲದ ಜೀವನವೇ ಇಲ್ಲ ಗೆಳತಿ
ಕಂಬನಿ ಇಲ್ಲದ ಕಂಗಳಿಲ್ಲಾ
ದುಃಖ ಇಲ್ಲದ ಮನಸ್ಸು ಇಲ್ಲವೇ ಬರಿ
ಸುಖವ ಕಂಡ ಮನುಜನಿಲ್ಲ
ನಮ್ ಪ್ರೀತಿ ಸಾಯೊದಿಲ್ಲ
ಅದಕ್ಕೆಂದು ಸೋಲೆ ಇಲ್ಲ
ನನ್ನಾಣೆ ನಂಬು ನನ್ನ ಉಸಿರೆ
ನನಗಾಗಿ ಜನಿಸಿದೆ ನೀನು ನನ್ನೊಳಗೆ ನೆಲೆಸಿದೆ ನೀನು
ನಿನಗಾಗೆ ಬದುಕಿದೆ ನಾನು
ನೀನನ್ನ ಅಗಲಿದಾಕ್ಷಣೆವೆ ನಾ ನಿನಗಿಂತ ಮೊದಲೆ ಮಡಿವೆ

ತಂದೆಯ ತಾಯಿಯ ಬಿಟ್ಟು ಬಂದೆ ನೀ ಗೆಳತಿ
ಇಬ್ಬರ ಪ್ರೀತಿಯ ನಾ ಕೊಡುವೆ
ನನ್ನೆದೆ ಗೂಡಲಿ ಬಂದಿಸಿ ನಾ ನಿನ್ನ ಗೆಳತಿ
ಸಾವಿಗು ಅಂಜದೆ ಎದೆಕೊಡುವೆ
ಮಗುವಂತೆ ಲಾಲಿಸಲೇನು
ಮಡಿಲಲ್ಲಿ ತೂಗಿಸಲೇನು
ಬೆಳಂದಿಂಗಳ ಊಟ ಮಾಡಿಸಲೇನು
ಕಣ್ಮುಚ್ಚಿ ಕುಳಿತರೆ ನೀನು ಕಣ್ಣಾಗಿ ಇರುವೆ ನಾನು
ಕನಸಲ್ಲು ಕಾವಲಿರುವೆ
ಕಣ್ಣೀರು ಬಂದರಿಲ್ಲಿ ಕಣ್ಮರೆಯಾಗುವೆ ನಾ, ನನಗೆ ನೀನೆ ಉಸಿರು

ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ...
ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎಂದು

ಕನಸೋ ಇದು ನನಸೋ ಇದು

ಚಿತ್ರ: ಚೆಲುವಿನ ಚಿತ್ತಾರ
ಸಾಹಿತ್ಯ: ಎಸ್. ನಾರಾಯಣ್
ಗಾಯನ: ಸೋನು ನಿಗಮ್, ಸುನಿಧಿ ಚೌಹಾನ್

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನೀ ನನ್ನಲಿ ನಾ ನಿನ್ನಲಿ ಅಂದುಕೊಂಡರೆ
ಎಂಥಾ ರೋಮಾಂಚನ
ಅಂತರಂಗದಾ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವು
ಪ್ರೀತಿ ಜನಿಸುವಾ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು

ಕನಸೋ ಇದು ನನಸೋ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾ ನಿನ್ನಲಿ ನೀ ನನ್ನಲಿ ಅಂದುಕೊಂಡರೆಎಂಥಾ ರೋಮಾಂಚನ

ಪ್ರೀತಿ ನೀ ಹುಟ್ಟೋದೆಲ್ಲಿ ನಿನ್ನ ಆ ತವರುರೆಲ್ಲಿ
ನಿಂಗೆ ತಾಯ್ತಂದೆ ಯಾರು ನೀ ಹೇಳೆಯಾ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಪ್ರೀತಿ ನಿಂಗಿಷ್ಟ ಯಾರು
ನಿನ್ನ ಕೈಗೊಂಬೆ ಇವರು
ಇವರಾ ಆಸೆಯಾ ತುಂಬ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನೀನಿದ್ದರೆ ಇಲ್ಲಿ ಸುಖ ಸಾಗರ

ಕನಸೋ ಇದು ನನಸೋ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾ ನಿನ್ನಲಿ ನೀ ನನ್ನಲಿ ಅಂದುಕೊಂಡರೆ ಎಂಥಾ ರೋಮಾಂಚನ

ಪ್ರೀತಿ ಈ ಹೃದಯಗಳನ್ನು
ನೀನು ಆವರಿಸಿಕೊಂಡೆ
ನಿನ್ನ ಇಷ್ಟಾನುಸಾರ ಕರೆದೊಯ್ಯುವೆ
ಇವರಿಬ್ಬರು ಮತಿ ಹೀನರು
ನಿನ್ನ ಮುಷ್ಠಿಗೆ ಇಲ್ಲಿ ಶರಣಾದರು
ಪ್ರೀತಿ ಈ ಸಂಭ್ರಮದಲ್ಲಿ
ಇವರಾ ಈ ಸಂಗಮದಲ್ಲಿ
ಕಣ್ಣಾ ಕರೆಯೋಲೆಗಳಲ್ಲಿ ನೀನಿಲ್ಲವೆ
ನಿನಗಿಂತಲೂ ಹಿತ ಯಾವುದು

ಉಲ್ಲಾಸದ ಹೂಮಳೆ

ಚಿತ್ರ: ಚೆಲುವಿನ ಚಿತ್ತಾರ
ಸಾಹಿತ್ಯ: ಎಸ್. ನಾರಾಯಣ್
ಗಾಯನ: ಶ್ರೇಯಾ ಘೋಷಾಲ್

ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನ್ ಹೊಳೆ
ಹರಿಯುತಿದೆ ಕಣ್ಣಲಿ
ಮುಂಜಾನೆಯು ನೀ
ಮುಸ್ಸಂಜೆಯು ನೀ
ನನ್ನೆದೆಯ ಬಡಿತವು ನೀ
ಹೃದಯದಲ್ಲಿ ಬೆರೆತವ ನೀ
ಮೊದ ಮೊದಲು ನನ್ನೊಳಗೆ
ಉದಯಿಸಿದಾ ಆಸೆಯು ನೀ
ನನ್ನವನೆ ಎಂದಿಗು ನೀ
ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ

ನಾನನಾನಾನಾ ನಾನನಾನಾನ

ಮಾತಿಲ್ಲದೆ ಕತೆಯಿಲ್ಲದೆ
ದಿನವೆಲ್ಲ ಮೌನವಾದೆ
ನಾ ಕಳೆದು ಹೋದೆನು
ಹುಡುಕಾಡಿ ಸೋತೆನು
ಹಸಿವಿಲ್ಲದೆ ನಿದಿರಿಲ್ಲದೆ
ದಣಿವಾಗಲು ಇಲ್ಲ
ನನ್ನೊಳಗೆ ನೀನಿರೆ
ನನಗೇನು ಬೇಡವೊ
ನನ್ನ್ ಪಾಠವು ನೀ
ನನ್ನೂಟವು ನೀ
ನಾ ಬರೆವ ಲೇಖನಿ ನೀ
ನಾ ಉಡುವ ಉಡುಗೆಯು ನೀ

ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ

ಸ ನಿ ಸ ನಿ ಸಾ
ಸ ನಿ ಸ ನಿ ಸಾ
....

ಅರಳುತಿರು ಜೀವದ ಗೆಳೆಯ

ಚಿತ್ರ: ಮುಂಗಾರು ಮಳೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯನ: ಶ್ರೇಯ ಘೋಷಾಲ್

ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ ಪ್ರೇಮದ ಬಂದನದಲ್ಲಿ
ಮನಸಲ್ಲೇ ಇರಲಿ ಬಾವನೆ ಮಿಡಿಯುತಿರಲಿ ಮೌನ ವೀಣೇ ಹೀಗೇ ಸುಮ್ಮನೇ…

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೇ
ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೇ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ ನಮಗೇಕೆ ಅದರ ಯೋಚನೇ
ಬೇಡ ಗೆಳೆಯ ನಂಟಿಗೆ ಹೆಸರು ಯಾಕೇ ಸುಮ್ಮನೇ…. || ಅರಳುತಿರು ||

ಮಾತಿಗೆ ಮೀರಿದ ಬಾವದ ಸೆಳೆತವೇ ಸುಂದರ
ನಲುಮೆಯು ತುಂಬಿದಾ ಮನಸಿಗೆ ಬಾರದು ಬೇಸರ
ಬಾಳ ದಾರಿಯ ಬೇರೇಯಾದರು ಚಂದಿರ ಬರುವನು ನಮ್ಮ ಜೊತೆ ಕಾಣುವೆನು ಅವನಲ್ಲೇ ನಿನ್ನನು
ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೇ……..|| ಅರಳುತಿರು ||

ಸುವ್ವಿ ಸುವ್ವಾಲಿ

ಚಿತ್ರ: ಮುಂಗಾರು ಮಳೆ
ಗಾಯಕ : ಹೇಮಂತ್‌ ಕುಮಾರ್
ಸಾಹಿತ್ಯ :ಶಿವ

ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ, ಚೆಲುವಾಂತ ಚೆನ್ನಿಗರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು

ಚಿನ್ನ, ಅಪರಂಜಿಗಿಂತ ಚೆನ್ನ ನಿನ್ನ ಹುಡುಗನು
ನಿನ್ನ ನೆರಳಂತೆ ಮೂರು ಹೊತ್ತು ಜೊತೆ ಇರುವನು
ಯಾರೂ ಕೊಡದಷ್ಟು ಒಲವ ತಂದು ತೊಗೊ ಎನುವನು
ಒಂದು ಘಳಿಗೇನು ನಿನ್ನ ಬಿಟ್ಟು ಇರನು ಇರನು

ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ, ಚೆಲುವಾಂತ ಚೆನ್ನಿಗರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು

ಅವನ ಮನಸೊಂದು ಒಲವ ತೂಗೋ ಜೋಕಾಲಿಯೋ
ಅಲ್ಲಿ ಹಾಡುವಂತ ಜೋಗುಳಗಾನ ಪ್ರೀತಿ ಲಾಲಿಯೋ
ಗೆಳತಿ ಆ ಉಯ್ಯಾಲೆಯಲ್ಲಿ ಆ ಲಾಲಿಯಾ ಕೇಳೋಚ್‌
ಭಾಗ್ಯ ಬಂದು ಬಾಗಿಲ ತಟ್ಟಿ ಕರೆದಿದೆ ನಿನ್ನ

ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ, ಚೆಲುವಾಂತ ಚೆನ್ನಿಗರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು

ಇವನು ಗೆಳೆಯನಲ್ಲ

ಚಿತ್ರ: ಮುಂಗಾರು ಮಳೆ
ಗಾಯಕಿ :ಶ್ರೇಯಾ ಗೋಶಲ್‌
ಸಾಹಿತ್ಯ :ಶಿವ

ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ, ಯಾಕೆ ಈ ಥರ
ಜಾಣ ಮನವೇ ಕೇಳು, ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ

ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ

ಒಲವ ಹಾದಿಯಲ್ಲಿ, ಇವನು ನನಗೆ ಹೂವು ಮುಳ್ಳು
ಮನದ ಕಡಲಿನಲ್ಲಿ, ಇವನು ಅಲೆಯಾ ಭೀಕರ ಸುಳಿಯಾ
ಅರಿಯದಂಥ ಹೊಸ ಕಂಪನವೊ, ಯಾಕೋ ಕಾಣೆನು
ಅರಿತ ಮರೆತ ಜೀವ, ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೆ ಮನವೆ, ಉಳಿಸು ನನ್ನನು

ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ

ಓ ತಿಳಿದು ತಿಳಿದು ಇವನು, ತನ್ನ ತಾನೆ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ, ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ, ಏನು ಕಳವಳ
ಮುಳುಗುವವನ ಕೂಗು, ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೀ ಹೃದಯ, ಏನೋ ತಳಮಳ

ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ

ಕುಣಿದು ಕುಣಿದು ಬಾರೆ

ಚಿತ್ರ: ಮುಂಗಾರು ಮಳೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡಿದವರು : ಉದಿತ್‌ ನಾರಾಯಣ್‌, ಸುನಿಧಿ ಚೌಹಾನ್‌ ಹಾಗೂ ಸ್ಟೀಫನ್‌

ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ, ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ, ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ, ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ

ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ, ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ

ಇರುಳಲಿ ನೀನೆಲ್ಲೋ ಮೈಮುರಿದರೆ, ನನಗಿಲ್ಲಿ ನವಿರಾದ ಹೂಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ, ಮಾತಿಲ್ಲ ಕಥೆಯಿಲ್ಲ ಬರೀ ರೋಮಾಂಚನ
ನಿನ್ನ ಕಣ್ಣತುಂಬ, ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೆ, ಪರಿಮಳದಲ್ಲಿ ಅರಳುವ ಬಾರೋ
ಒಲವೇ ವಿಸ್ಮಯ

ಒಲವೇ ನೀನೊಲಿದ ಕ್ಷಣದಿಂದಲೇ, ಈ ಭೂಮಿ ಈ ಬಾನು ಹೊಸದಾಗಿದೆ
ಖುಶಿಯಿಂದ ಈ ಮನವೆಲ್ಲ ಹೂವಾಗಿರೆ, ಬೇರೇನೂ ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಜೀವಕೆ ಜೀವ ತಂದವಳೆ, ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ, ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ

ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ, ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ

ಒಂದೆ ಒಂದು ಸಾರಿ ಕಣ್ಮುಂದೆ ಬಾರೆ

ಚಿತ್ರ: ಮುಂಗಾರು ಮಳೆ
ಹಿನ್ನೆಲೆ ಗಾಯಕರು : ಕುನಾಲ್‌ ಗಾಂಜವಾಲ, ಪ್ರಿಯ ಹೇಮೇಶ್‌
ಸಾಹಿತ್ಯ : ಕವಿರಾಜ್‌

ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ

ಒಂದೆ ಕ್ಷಣ ಎದುರಿದ್ದು
ಆ ಒಂದೆ ಕ್ಷಣ ಎದುರಿದ್ದು
ನನ್ನ ಈ ಬಾಳನು ನೀ ಸಿಂಗರಿಸಿದೆ
ನನ್ನ ಮೈಮನಸನು ನೀ ಆವರಿಸಿದೆ

ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ

ನಿನ್ನ ನಗು ನೋಡಿದಾಗ
ನಿನ್ನ ನಗು ನೋಡಿದಾಗ
ಹಗಲಲ್ಲೂ ಸಹ ತಿಳಿ ಬೆಳದಿಂಗಳು
ಸುರಿದಂತಾಯಿತು ಸವಿದಂತಾಯಿತು

ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ

ಅನಿಸುತಿದೆ ಯಾಕೋ ಇಂದು

ಚಿತ್ರ: ಮುಂಗಾರು ಮಳೆ
ಗಾಯಕ :ಸೋನು ನಿಗಮ್‌
ಸಾಹಿತ್ಯ :ಜಯಂತ್‌ ಕಾಯ್ಕಿಣಿ

ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ
ಅನಿಸುತಿದೆ ಯಾಕೋ ಇಂದು

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲೋ ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆ ಹಾಗೆ ಸುಮ್ಮನೆ
ಅನಿಸುತಿದೆ ಯಾಕೋ ಇಂದು


ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೇ ಹಾಗೇ ಸುಮ್ಮನೆ

ಅನಿಸುತಿದೆ ಯಾಕೋ ಇಂದು,
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ ನನಗಾಗೆ ಬಂದವಳೆಂದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ
ಅನಿಸುತಿದೆ ಯಾಕೋ ಇಂದು

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಚಿತ್ರ: ಮುಂಗಾರು ಮಳೆ
ಗಾಯಕ : ಸೋನು ನಿಗಮ್‌
ಸಾಹಿತ್ಯ : ಯೋಗರಾಜ್‌ ಭಟ್‌

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯಾ ಜಡಿಮಳೆಗೆ, ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯಾಡೆಯುವುದೋ, ತಿಳಿಯದಾಗಿದೆ
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬಾ, ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ, ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿ ಸದ್ದು, ಪ್ರೇಮ ನಾದವೋ
ಎದೆ ಮುಗಿಲಿನಲ್ಲಿ, ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು, ಏನೋ ಮೋಡಿಯೋ
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದ, ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಷದಿಂದ, ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ, ಯಾರು ಬರೆದರೋ
ಯಾವ ಪ್ರೀತಿ ಹೂವು, ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ, ಯಾರು ಬಲ್ಲರೋ
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಒಲವ ಚಂದಮಾಮ, ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ, ಹೃದಯ ಹೊರಟಿದೇ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ, ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ, ಕಳೆದು ಹೊಗೋ ಸುಖವಾ ಇಂದು
ಧನ್ಯನಾದೆ ಪಡೆದುಕೊಂಡು, ಹೊಸ ಜನ್ಮವೋ
ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ