Friday, December 29, 2017

ಒಂದೇ ಒಂದೇ ನಾವೆಲ್ಲರೂ ಒಂದೇ - ದೇಶಭಕ್ತಿ ಗೀತೆ

ದೇಶಭಕ್ತಿ ಗೀತೆ 

ಒಂದೇ ಒಂದೇ ನಾವೆಲ್ಲರೂ ಒಂದೇ
ಈ ದೇಶದಲೊಳು ಎಲ್ಲಿದ್ದರು ಭಾರತ ನಮಗೊಂದೇ ।।


ಹಲವು ಕೊಂಬೆಗಳು ಚಾಚಿಕೊಂಡರು, ಮರಕ್ಕೆ ಬುಡವೊಂದೇ ।
ಸಾವಿರ ನದಿಗಳು ಹೇಗೆ ಹರಿದರು, ಕೂಡುವ ಕಡಲೊಂದೇ ।
ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು, ಹಗಲಿಗೆ ರವಿ ಒಂದೇ ।
ಅಗಣಿತ ಗ್ರಹ ಮಂಡಲಗಳ ಚಲನೆಗೆ ಆಕಾಶವು ಒಂದೇ ।।

ನೂರು ಬಗೆಯ ಆರಾಧನೆ ಇದ್ದರು, ದೇವರೆಲ್ಲರಿಗೂ ಒಂದೇ ।
ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ಬಿಳುಪೊಂದೇ ।
ನಡೆನುಡಿ ಭೇದಗಳೆಷ್ಟೇ ಇದ್ದರೂ ಬದುಕುವ ಜನರೊಂದೇ ।
ನೆರಳು ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜವೊಂದೇ ।।

Monday, September 11, 2017

ಚಿತ್ರ: ಮುಗುಳು ನಗೆ (೨೦೧೭)
ಸಂಗೀತ: ವಿ. ಹರಿಕೃಷ್ಣ 
ಸಾಹಿತ್ಯ: ಯೋಗರಾಜ್ ಭಟ್ 
ಗಾಯನ : ಸೋನು ನಿಗಮ್ 




ಮುಗುಳು ನಗೆಯೇ ನೀ ಹೇಳು
ಯಾರಿರದ ವೇಳೆಯಲ್ಲಿ
ನೀ ಏಕೆ ಜೊತೆಗಿರುವೆ
ತುಸು ಬಿಡಿಸಿ ಹೇಳು ನನಗೆ
ನನ್ನ  ತುಟಿಯೆ  ಬೇಕೇ ನಿನಗೆ
ನನ್ನೆಲ್ಲ ನೋವಿಗೂ ನಗುವೇ
ನೀ ಏಕೆ ಹೀಗೆ ||

ಸಾಕಾಗದ ಏಕಾಂತವಾ
ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಮರೆ ಮಾಚುವೆ
ನನ್ನೆಲ್ಲ ಭಾವುಕತೆ
ಸೋತಂತಿದೆ ಸಂಭಾಷಣೆ
ಗೆಲ್ಲುವುದು ನಿನಗೆ ಹೊಸತೇ
ಅಳು ಒಂದು ಬೇಕು ನನಗೆ
ಅರೆ ಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ 
ಕಾಡಿದರೆ ಹೇಗೆ

ಕಣ್ಣಾಲಿಯ ಜಲಪಾತವ
ಬಂಧಿಸಲು ನೀ ಯಾರು
ನೀ ಮಾಡುವ ನಗೆಪಾಟಲು
ಖಂಡಿಸಲು ನಾ ಯಾರು
ಸಂತೋಷಕು ಸಂತಾಪಕು
ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂದ ಮಳೆಗೆ
ಕೊಡೆ ಹಿಡಿವ ಆಸೆಯೇ ನಿನಗೆ
ಅತ್ತು ಬಿಡು ನನ್ನಾ ಜೊತೆಗೆ
ನಗ ಬೇಡ ಹೀಗೆ


Friday, February 10, 2017

ತೂಗುಮಂಚದಲ್ಲಿ ಕೂತು



krishna radha ಗೆ ಚಿತ್ರದ ಫಲಿತಾಂಶ

ಕವಿ: ಹೆಚ್.ಎಸ್. ವೆಂಕಟೇಶ ಮೂರ್ತಿ
ಸಂಗೀತ: ಸಿ. ಅಶ್ವತ್ಥ್
ಗಾಯನ : ರತ್ನಮಾಲಾ ಪ್ರಕಾಶ್
ಚಿತ್ರದಲ್ಲಿ ಅಡವಳಿಕೆ: ಕಿರಿಕ್ ಪಾರ್ಟಿ
ಗಾಯನ : ಸಂಗೀತ ರವೀಂದ್ರನಾಥ್
ಸಂಗೀತ : ಅಜನೀಶ್ ಲೋಕನಾಥ್



ತೂಗುಮಂಚದಲ್ಲಿ ಕೂತು, ಮೇಘಶಾಮ ರಾಧೆಗಾತು ಆಡುತಿಹನು ಏನೋ ಮಾತು, ರಾಧೆ ನಾಚುತಿದ್ದಳು ||
ಸೆರಗ ಬೆರಳಿನಲ್ಲಿ ಸುತ್ತಿ, ಜಡೆಯ ತುದಿಯ ಕೆನ್ನೆಗೊತ್ತಿ ಜುಮ್ಮುಗುಡುವ ಮುಖವನೆತ್ತಿ, ಕಣ್ಣ ಮುಚ್ಚುತ್ತಿದ್ದಳು ||

ತೂಗುಮಂಚದಲ್ಲಿ ಕೂತು ....

ಮುಖವ ಎದೆಯ ನಡುವೆ ಒತ್ತಿ, ತೋಳಿನಿಂದ ಕೊರಳ ಸುತ್ತಿ ತುಟಿಯು ತೀಡಿ ಬೆಂಕಿ ಹೊತ್ತಿ, ಹಮ್ಮನುಸಿರ ಬಿಟ್ಟಳು ||
ಸೆರಗು ಜಾರುತಿರಲು ಕೆಳಗೆ, ಬಾನು ಭೂಮಿ ಮೇಲು ಕೆಳಗೆ ಅದುರುತಿರುವ ಅಧರಗಳಿಗೆ, ಬೆಳ್ಳಿ ಹಾಲ ಬಟ್ಟಲು ||

ತೂಗುಮಂಚದಲ್ಲಿ ಕೂತು ....
ಚಾಚುತಿರಲು ಅರಳಿದರಳು, ಯಮುನೆಯೆಡೆಗೆ ಚಂದ್ರ ಬರಲು ಮೇಲೆ ತಾರೆಗಣ್ಣ ಹೊರಳು, ಹಾಯಿ ದೋಣಿ ತೇಲಿತು ।।
ತನಗೆ ತಾನೇ ತೂಗುಮಂಚ, ತಾಗುತ್ತಿತ್ತು ದೂರದಂಚ ತೆಗೆಯೊ ಗರುಡ ನಿನ್ನ ಚೊಂಚ, ಹಾಲು ಗಡಿಗೆ ಹೇಳಿತು ।।