ಚಿತ್ರ: ಸಂಚಾರಿ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಅರ್ಜುನ್
ಹಾಡಿದವರು: ಸೋನು ನಿಗಮ್, ಶ್ರೇಯಾ ಘೋಷಲ್
ಒ ಸಾಯಾ ರೇ...ಓ.... ಓ....ಆ....ಓ...
ಗಾಳಿಯೇ ನೋಡು ಬಾ... ದೀಪದಾ ನರ್ತನಾ...
ರಾತ್ರಿಯೇ ನೀಡು ಬಾ...ಮಾಯದಾ ದರ್ಪಣಾ...
ನಿನ್ನಂತೆ ಕಾಡಿಲ್ಲಾ ಇನ್ನಾರು ನನ್ನಾ...
ನಿನ್ನಿಂದ ಈ ಪಾಡು ಇನ್ನೂನು ಚೆನ್ನಾ...
ಅದೆ ಪ್ರೀತಿಯಾ ಲಕ್ಷಣಾ.,.
ಗಾಳಿಯೇ ನೋಡು ಬಾ... ದೀಪದಾ ನರ್ತನಾ...
ಸಂಚಾರಿ ಮನ ಸೆರೆ ಆದ ಕ್ಷಣ ಇದೆ ಗೂಡಲ್ಲಿ ಚಂದ್ರೋದಯಾ...
ಸಿಹಿ ಆದ ಅಲೆ ಶುರುವಾದಗಲೆ ನಿಜ ಸಂಗಾತಿ ನೀನಾದೆಯಾ...
ಮ ಗ ಮ ರಿ ನೀ ನೀ ಸಾ...ಅ... ಆ...ಅ
ಮ ಗ ಮ ಗಾ ಮ ಸಾ ದಾ...ಅ... ಆ...ಅ
ಕನಸು ತಾ ಜಾರಿದೆ..
ನನಸು ಬೆರೆಸೋಣಾ...
ಅದೆ ಪ್ರೀತಿಯಾ ಲಕ್ಷಣಾ.,.
ಗಾಳಿಯೇ ನೋಡು ಬಾ... ದೀಪದಾ ನರ್ತನಾ...
ಹೆಸರನ್ನೂ ಸಹಾ.. ಮರೆವಂತಾ ಭಯಾ... ಇದುವೇನಿಂತ ಆಕರ್ಷಣೇ...
ಮರುಳಾದಾಗಲೇ...ಮರು ಜನ್ಮವಿದೆ...ಬಿಗಿ ಮೌನಾನೆ ಸಂಭಾಷಣೇ...
ಮ ಗ ಮ ರಿ ನೀ ನೀ ಸಾ...ಅ... ಆ...ಅ
ಮ ಗ ಮ ಗಾ ಮ ಸಾ ದಾ...ಅ... ಆ...ಅ
ಒಗಟು ಒಂದಾಗಿ
ಜೊತೆಯಾಗಿ ಬಿಡಿಸೋಣಾ...
ಅದೆ ಪ್ರೀತಿಯಾ ಲಕ್ಷಣಾ.,.
ಗಾಳಿಯೇ ನೋಡು ಬಾ... ದೀಪದಾ ನರ್ತನಾ...
1 comment:
ಜಯಂತ್ ಕಾಯ್ಕಿಣಿ ಹಾಡಿನ ಸಾಲೆ ಹಾಗೆ ಮುದ ನೀಡುತ್ತವೆ. ಸೋನುನಿಗಂ, ಶ್ರೇಯಾ ಘೋಶಾಲ್ ಇತ್ತೀಚಿಗೆ ನಮ್ಮವರೇ ಅನ್ನುವ ಹಾಡಿ ಕನ್ನಡಿಗರ ಮನೆಮಾತಾಗಿದ್ದಾರೆ. ಉತ್ತಮ ಪ್ರಯತ್ನ ಮಾಡಿದ್ದೀರಿ. ಹಾಗೆ ಹಳೆಯ ಕನ್ನಡ ಚಿತ್ರಗೀತೆಗಳ ಬಗ್ಗೆ ಬರೆಯಿರಿ.
Post a Comment