Showing posts with label kannada. Show all posts
Showing posts with label kannada. Show all posts

Monday, September 13, 2010

ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ

ಚಿತ್ರ: ಪೋಸ್ಟ್ ಮಾಸ್ಟರ್ (೧೯೬೪)
ಸಂಗೀತ: ವಿಜಯ ಭಾಸ್ಕರ್
ಹಾಡಿರುವವರು: ಪಿ.ಬಿ. ಶ್ರೀನಿವಾಸ್

ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ
ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀನೆ

ಪ್ರೇಮ ಕರುಣೆಯ ಕಲಿಸಿ ಶಾಂತಿ ಸಹನೆಯ ಬೆಳೆಸಿ
ಕಾಮಕ್ರೋಧವನಳಿಸಿ ಕಾಪಾಡು ತಾಯೇ
ಒಂದಾದ ದೇಶದಲಿ ಹೊಂದಿ ಬಾಳದ ಸುತರ
ಹೊಸಬೆಸುಗೆಯಲಿ ಬಿಗಿದು ಒಂದು ಗೂಡಿಸೆ ತಾಯೇ

ಯಾವೆಣ್ಣೆಯಾದರೂ ಬೆಳಗುವುದೇ ಗುರಿಯೆಂಬ
ತತ್ತ್ವವನು ನೀನೆತ್ತಿ ತೋರುಬಾ ತಾಯೇ
ಎದೆಯಾಂತರಾಳದಲಿ ಪುಟಿವ ಕಾರಂಜಿಯಲಿ
ಒಂದಾಗಿ ಕೂಗಲಿ ಕನ್ನಡಾ ಕನ್ನಡಾ...