Monday, September 11, 2017

ಚಿತ್ರ: ಮುಗುಳು ನಗೆ (೨೦೧೭)
ಸಂಗೀತ: ವಿ. ಹರಿಕೃಷ್ಣ 
ಸಾಹಿತ್ಯ: ಯೋಗರಾಜ್ ಭಟ್ 
ಗಾಯನ : ಸೋನು ನಿಗಮ್ 




ಮುಗುಳು ನಗೆಯೇ ನೀ ಹೇಳು
ಯಾರಿರದ ವೇಳೆಯಲ್ಲಿ
ನೀ ಏಕೆ ಜೊತೆಗಿರುವೆ
ತುಸು ಬಿಡಿಸಿ ಹೇಳು ನನಗೆ
ನನ್ನ  ತುಟಿಯೆ  ಬೇಕೇ ನಿನಗೆ
ನನ್ನೆಲ್ಲ ನೋವಿಗೂ ನಗುವೇ
ನೀ ಏಕೆ ಹೀಗೆ ||

ಸಾಕಾಗದ ಏಕಾಂತವಾ
ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಮರೆ ಮಾಚುವೆ
ನನ್ನೆಲ್ಲ ಭಾವುಕತೆ
ಸೋತಂತಿದೆ ಸಂಭಾಷಣೆ
ಗೆಲ್ಲುವುದು ನಿನಗೆ ಹೊಸತೇ
ಅಳು ಒಂದು ಬೇಕು ನನಗೆ
ಅರೆ ಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ 
ಕಾಡಿದರೆ ಹೇಗೆ

ಕಣ್ಣಾಲಿಯ ಜಲಪಾತವ
ಬಂಧಿಸಲು ನೀ ಯಾರು
ನೀ ಮಾಡುವ ನಗೆಪಾಟಲು
ಖಂಡಿಸಲು ನಾ ಯಾರು
ಸಂತೋಷಕು ಸಂತಾಪಕು
ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂದ ಮಳೆಗೆ
ಕೊಡೆ ಹಿಡಿವ ಆಸೆಯೇ ನಿನಗೆ
ಅತ್ತು ಬಿಡು ನನ್ನಾ ಜೊತೆಗೆ
ನಗ ಬೇಡ ಹೀಗೆ