ಕವನ: ಬಿ.ಆರ್. ಲಕ್ಷ್ಮಣರಾವ್
ಸಂಗೀತ: ಉಪಾಸನ ಮೋಹನ್
ಹಾಡುಗಾರಿಕೆ: ಪಲ್ಲವಿ ಅರುಣ್
ಆಗು ಗೆಳೆಯ, ಆಗು ನೀನು
ಭರವಸೆಯ ಪ್ರವಾದಿ...
ಹತಾಶೆಯಲ್ಲೇನಿದೆ.. ಹತಾಶೆಯಲ್ಲೇನಿದೆ..
ಬರೀ ಶೂನ್ಯ.. ಬರೀ ಬೂದಿ
ಆಗು ಗೆಳೆಯ, ಆಗು ನೀನು
ಭರವಸೆಯ ಪ್ರವಾದಿ...
ಕೊಚ್ಚಿದಷ್ಟು ಹೆಚ್ಚಿ ಬರುವ ಸೃಷ್ಟಿ ಶೀಲ ಪ್ರಕೃತಿ..
ಉಬ್ಬಿಯಲ್ಲೂ ಹುಳಿ ನೀಗಿದ ಸಿಹಿಹಣ್ಣಿನ ಪ್ರೀತಿ
ಅದುಮಿದಷ್ಟು ಚಿಮ್ಮಿಬರುವ ಚೈತನ್ಯದ ಚಿಲುಮೆ
ಇಂದು ನಮ್ಮ ಯತ್ನಗಳಿಗೆ ಇದೇ ತಕ್ಕ ಪ್ರತಿಮೆ
ಆಗು ಗೆಳೆಯ, ಆಗು ನೀನು
ಭರವಸೆಯ ಪ್ರವಾದಿ...
ಚೋಪಡಿಯಲು ಜೋಗುಳಾ ಅಂಗಳದಲಿ ಹೂ ಹಸೆ
ಕೊಳಗೇರಿಯ ಕೊಚ್ಚೆಯಲ್ಲೂ ಮಗು ಗುಲಾಬಿ ನಗೆ
ಚಿಂದಿಯಲ್ಲೂ ಹಿಕ್ಕು ಹರೆಯಾ ನೂರು ಕನಸು ಕವಿತೆ
ಹಟ್ಟಿಯಲ್ಲೂ ಹುಟ್ಟುಹಬ್ಬ ಮುಂಬೆಳಗಿನ ಹಣತೇ
ಆಗು ಗೆಳೆಯ, ಆಗು ನೀನು
ಭರವಸೆಯ ಪ್ರವಾದಿ...
ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ
ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ
ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ
ಇಲ್ಲದಿರಲು ನಿನ್ನ ಈ ಹತಾಶೆ ಕೂಡ ಸ್ವಾರ್ಥ
ಆಗು ಗೆಳೆಯ, ಆಗು ನೀನು
ಭರವಸೆಯ ಪ್ರವಾದಿ...
ಆಗು ಗೆಳೆಯ, ಆಗು ನೀನು
ಭರವಸೆಯ ಪ್ರವಾದಿ...
ಹತಾಶೆಯಲ್ಲೇನಿದೆ.. ಹತಾಶೆಯಲ್ಲೇನಿದೆ..
ಬರೀ ಶೂನ್ಯ.. ಬರೀ ಬೂದಿ
http://mio.to/album/171-Kannada_Bhaava_Geethe/27223-Bandihanu_Enniniya/IKNbdxKMrUw/#/album/171-Kannada_Bhaava_Geethe/27223-Bandihanu_Enniniya/IKNbdxKMrUw/