Friday, September 7, 2007

ಆನಂದಮಯ ಈ ಜಗಹೃದಯ (ಭಾವಗೀತೆ)

ಕವಿ : ಕುವೆಂಪು
ಸುರುಳಿ: ಭಾವಬಿಂದು
ಸಂಗೀತ : ಸಿ.ಅಶ್ವಥ್
ಗಾಯನ : ಶಿವಮೊಗ್ಗ ಸುಬ್ಬಣ್ಣ

ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ

ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ

ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನು ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ

ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ

ಉದಯದೊಳೇನ್ ಉದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ

ನಿನ್ನ ಕ೦ಗಳ ಕೊಳದಿ (ಭಾವಗೀತೆ)

ಕವಿ : ಎಂ.ಎನ್. ವ್ಯಾಸರಾವ್
ಸಂಗೀತ: ಅಶ್ವತ್ಥ್
ಗಾಯನ: ರತ್ನಮಾಲಾ ಪ್ರಕಾಶ್

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು ||೨||
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು
ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆಯ ನಗೆಯು ಛೇಡಿಸಿಹುದು ||೨||
ಬಳಿಗೆ ಬಾರದೆ ನಿ೦ತೆ ಹೃದಯ ತು೦ಬಿದೆ ಚಿ೦ತೆ ||೨||
ಜೀವ ನಿನ್ನಾಸರೆಗೆ ಕಾಯುತಿಹುದು

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು

ನಾನೊ೦ದು ದಡದಲ್ಲಿ ನೀನೊ೦ದು ದಡದಲ್ಲಿ||೨||
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ಎ೦ದು ಬರುವುದೊ ಕಾಣೆ||೨||
ನೀನಿರುವ ಬಳಿಯಲ್ಲಿ ನನ್ನ ಬಿಡಲು

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು
ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ನನ್ನೆದೆಯ ಕಡಲೇಕೆ ಬೀಗುತಿಹುದು
ನನ್ನೆದೆಯ ಕಡಲೇಕೆ ಬೀಗುತಿಹುದು

ಕಲ್ಪನಾ ಛಾಯೆಯಲಿ (ಭಾವಗೀತೆ)

ಕವಿ : ರಾಜಶೇಖರ ಭೂಸ್ನೂರ್ಮಠ್
ಸುರುಳಿ: ದೀಪೋತ್ಸವ
ಸಂಗೀತ, ಗಾಯನ: ಮೈಸೂರು ಅನಂತಸ್ವಾಮಿ

ಕಲ್ಪನಾ ಛಾಯೆಯಲಿ ನಲ್ಮೆಯ ನೌಕೆಯಲಿ
ನೀಲ ಮಣಿ ಹೊಳೆದಂತೆ ಹೊಳೆ ಹೊಳೆದು
ಹೋದೆಯ ಶಕ್ತಿ ತನುಜಾತೆ

ಜಗವೆಲ್ಲ ಮಲಗಿಹುದು
ಚಂದಿರನು ನಗುತಿಹನು
ತಂಗಾಳಿ ಬೀಸುತಿದೆ
ನೀನೆಲ್ಲಿ ಮನದನ್ನೆ
ಕುಂತಳಾ ಶೋಭೆಯೇ

ಆ ಪ್ರಥಮ ದರುಶನದಿ ಮೊಗದ ಚೆಲುವ ತೋರಿ
ನೂಪುರದ ರವ ಬೀರಿ ಮಲ್ಲಿಗೆಯ ನಗೆ ನಕ್ಕೆ
ತನಿ ರಸದಾ ತವರೆ

ಆ ನೋಟ ನುಡಿಯಾಗಿ ಆ ನಗೆಯು ನಗೆಯಾಗಿ
ಆ ನೇಹ ಮಧುವಾಗಿ ಮನದಲ್ಲಿ ಸುಳಿಯುತಿವೆ
ಲಾಸ್ಯ ಪ್ರವೀಣೆ

Monday, September 3, 2007

ಈ ಸಂಜೆ ಯಾಕಾಗಿದೆ (ಗೆಳೆಯ)

ಚಿತ್ರ: ಗೆಳೆಯ
ನಿರ್ದೇಶನ: ಹರ್ಷ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ..//೧//
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ..
ಏಕಾಂತವೇ ಆಲಾಪವೂ ಏಕಾಂಗಿಯಾ ಸಲ್ಲಾಪವೂ
ಈ ಮೌನ ಬಿಸಿಯಾಗಿದೆ ಓ...ಈ ಮೌನ ಬಿಸಿಯಾಗಿದೆ // ಈ ಸಂಜೆ..//

ಲಾ ಲಾ ಲ ಲ ಲಾ ಲ ಲಾ ಲಾ....

ಈ ನೋವಿಗೆ ಕಿಡೀ ಸೋಕಿಸಿ ಮಜ ನೋಡಿವೇ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೇ ನನ್ನಾ ಕ್ಷಣಾ
ನೆನಪೆಲ್ಲವೂ ಹೂವಾಗಿದೆ ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೇ..ಈ ಜೀವ ಕಸಿಯಾಗಿದೇ ..// ಈ ಸಂಜೆ..//

ಆ ಆ ಆ...ಆ ಆ ಆ..

ನೀನಿಲ್ಲದೇ ಆ ಚಂದಿರಾ ಈ ಕಣ್ಣಲೀ ಕಸವಾಗಿದೇ
ಅದನೂದುವಾ ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೇ
ಆಕಾಶದೀ ಕಲೆಯಾಗಿದೇ ಈ ಸಂಜೆಯಾ ಕೊಲೆಯಾಗಿದೇ
ಈ ಗಾಯ ಹಸಿಯಾಗಿದೇ...ಈ ಗಾಯ ಹಸಿಯಾಗಿದೇ ..// ಈ ಸಂಜೆ.. //

Thursday, August 30, 2007

ಯಾರು ತಿಳಿಯರು (ಬಭ್ರುವಾಹನ)

ಚಿತ್ರ : ಬಭ್ರುವಾಹನ
ಸಂಗೀತ: ಟಿ.ಜಿ. ಲಿಂಗಪ್ಪ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಗಾಯನ: ರಾಜ್ ಕುಮಾರ್, ಪಿ.ಬಿ.ಶ್ರೀನಿವಾಸ್
ವರ್ಷ : ೧೯೭೭

ಬಭ್ರುವಾಹನ:
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ.. ಆ... ಆ .. ಆ..

ಅರ್ಜುನ:
ಅಸಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ.. ಈ...

ಬಭ್ರುವಾಹನ:
ಓ ಹೊ ಹೋ ಹೊ ಉಗ್ರಪ್ರತಾಪಿ ಆಂ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯೆಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡೀ ..ಈ ...

ಅರ್ಜುನ:
ಫಡ ಫಡ ಶಿಖಂಡಿಯೆಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ .. ಆ...

ಬಭ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ:
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬಭ್ರುವಾಹನ:
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ

ಬಭ್ರುವಾಹನ:
ಅಂತಕನಿಗೆ ಅಂತಕನು ಈ ಬಭ್ರುವಾಹನ

Wednesday, August 29, 2007

ನಿನ್ನಿಂದಲೇ ನಿನ್ನಿಂದಲೇ (ಮಿಲನ)

ಚಿತ್ರ:ಮಿಲನ
ನಿರ್ದೇಶನ : ಪ್ರಕಾಶ್
ಸಂಗೀತ : ಮನೋ ಮೂರ್ತಿ
ಸಾಹಿತ್ಯ : ಜಯಂತ್ ಕಾಯ್ಕಿಣಿ

ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲಿ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲಾ
ನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇ ||ನಿನ್ನಿಂದಲೇ ||

ಇರುಳೆಲ್ಲಾ ಜ್ವರದಂತೆ ಕಾಡಿ
ಈಗ ಹಾಯಾಗಿ ನಿಂತಿರುವೆ ಸರಿಯೇನು?
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ತಡೆಬಂದಿದೇ ||ನಿನ್ನಿಂದಲೇ ||


ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನಾ
ಸೊಂಪಾದ ನಗುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನಾ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೇ ಮುದ್ದಾದ ಕರೆ ಬಂದಿದೇ ||ನಿನ್ನಿಂದಲೇ ||

ನೂರೂ ಜನ್ಮಕೂ

ಚಿತ್ರ: ಅಮೇರಿಕಾ ಅಮೇರಿಕಾ
ನಿರ್ದೇಶನ, ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಮನೋ ಮೂರ್ತಿ

ನೂರೂ ಜನ್ಮಕೂ...
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ ಓಹೋಹೋ
ನನ್ನೆದೆಯ ಬಾಂದಳದೀ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ

ನೂರೂ ಜನ್ಮಕೂ...

ಬಾ ಸಂಪಿಗೆ ಸವಿಭಾವಲಹರೀ ಹರಿಯೇ
ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ ಓಹೋಹೊ
ಲೋಕದಾ ಸುಖವೆಲ್ಲಾ ನಿನಗಾಗಿ ಮುಡಿಪಿರಲೀ
ಇರುವಂಥ ನೂರು ಕಹೀ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ

ನೂರೂ ಜನ್ಮಕೂ...